Scinovex
article Open Access

ಮಹಕವ ಕಳದಸನ ಕತಗಳಲಲ ಪರತಬಬತವದ ಭರತಯ ಸಹತಯ ಮತತ ಭರತಯ ದರಶನ

International Journal of Kannada Research · 2025 · Vol. 11(1) · pp. 10–19

Abstract

ಭಾರತೀಯ ಮತ್ತು ಪಾಶ್ಚಾತ್ಯ ದೃಷ್ಟಿಗಳೆರಡರಿಂದಲೂ ಕಾಳಿದಾಸನನ್ನು ಸಂಸ್ಕೃತ ಸಾಹಿತ್ಯದ ಸರ್ವ ಮಾನ್ಯನಾದ ಕವಿ ಎಂಬುದಾಗಿ ಆದರಿಸುತ್ತಾರೆ. ನಾಟ್ಯ ಕಲೆಯ ಸೌಂದರ್ಯ, ಕಾವ್ಯಗಳಲ್ಲಿನ ವರ್ಣನಾ ಶೈಲಿ, ಖಂಡ ಮತ್ತು ಗೀತಕಾವ್ಯಗಳ ಸರಸವಾದ ಹೃದಯ ಭಾವನೆ, ಇವೆಲ್ಲದರಲ್ಲಿಯೂ ಕಾಳಿದಾಸನ ಪ್ರತಿಭೆಯು ಸರ್ವತೋಮುಖವಾಗಿದೆ. ಅವನ ಖ್ಯಾತಿಯು ಎಷ್ಟು ನಿಶ್ಚಿತವಾಗಿದೆಯೋ, ಅವನ ಸಮಯವು ಅಷ್ಟೇ ಅನಿಶ್ಚಿತವಾಗಿದೆ. ಉಜ್ಜಯಿನೀ ಪ್ರದೇಶವಲ್ಲದೇ ಬಂಗಾಳ ಮತ್ತು ಕಾಶ್ಮೀರಗಳನ್ನು ಕಾಳಿದಾಸನ ಜನ್ಮ ಸ್ಥಾನವೆಂದು ಹೇಳುತ್ತಾರೆ. ಕಾಳಿದಾಸನು ನಿಸ್ಸಂದೇಹವಾಗಿ ಶೈವನಾಗಿದ್ದನು. ಅವನು ಉಜ್ಜಿ ನಿಯಲ್ಲಿನ ಜ್ಯೋತಿರ್ಲಿಂಗವಾದ ಮಹಾಕಾಲನ ಉಪಾಸಕನಾಗಿದ್ದನೆಂಬುದು ನಮ್ಮ ಅಭಿಪ್ರಾಯ. ಮೇಘದೂತದಲ್ಲಿ ಮಹಾಕಾಲನ ಉಪಾಸನೆಗಾಗಿ ತೋರಿಸುವ ಅವನ ಆಸಕ್ತಿಯೇ ಇದಕ್ಕೆ ಆಧಾರವೆಂದು ಅಂಗೀಕರಿಸಬಹುದು. ಮಹಾಕಾಲನ ವರ್ಣನೆ ಮಾಡುತ್ತಾ ಯಕ್ಷನು ಮೇಘಕ್ಕೆ ಹೇಳುತ್ತಾನೆ- ಉಜ್ಜಿನಿಯನ್ನು ನೀನು ಯಾವ ಸಮಯದಲ್ಲಿ ತಲಪಿದರೂ ಸಹ ಸೂರ್ಯನು ಅಸ್ತನಾಗುವವರೆವಿಗೂ ನೀನು ಅಲ್ಲಿ ಇರಬೇಕು. ಪ್ರದೋಷ ಪೂಜೆಯ ಸಮಯದಲ್ಲಿ ನೀನು ಸ್ನಿಗ್ಧ ಗಂಭೀರ ಘೋಷವನ್ನು ಮಾಡಬೇಕು, ಅದು ಮಹಾಕಾಲನ ಪೂಜೆಯ ಸಮಯದಲ್ಲಿ ನಗಾರಿಯ ಕೆಲಸವನ್ನು ಮಾಡುತ್ತದೆ. ಹೀಗೆ ಅಮೋಘವಾದ ವರ್ಣನೆಮಾಡಿದ್ದಾನೆ. ಇದು ಕವಿಯ ಧಾರ್ಮಿಕತೆ ಮತ್ತು ರಾಷ್ಟ್ರೀಯ ಮನೋಭಾವನೆಯ ಪ್ರತಿಬಿಂಬವಾಗಿದೆ.ರಘುವಂಶ ಭಾರತೀಯ ವಿಮರ್ಶಾಪರಂಪರೆಯು ರಘುವಂಶವನ್ನು, ಕಾಳಿದಾಸನ ಸರ್ವಶ್ರೇಷ್ಠ ಕೃತಿ ಎಂದು ಆದರಿಸುತ್ತದೆ. ಆದುದರಿಂದ ಕಾಳಿದಾಸನಿಗೆ ಮಾತ್ರ

Citations
0
FWCI
0.00
field-weighted impact
References
0
Percentile
1%
vs. same field & year
Citation Network

How this paper connects to the literature. Drag to explore, click any node to open that paper.

ಮಹಕವ ಕಳದಸನ ಕತಗಳಲಲ ಪರತಬಬತವದ ಭರತಯ ಸಹತಯ ಮತತ ಭರತಯ ದರಶನ · Scinovex