ಏಕರಪ ನಗರಕ ಸಹತ: ಲಗ ನಯಯದ ಕಡಗ
Abstract
ಏಕರೂಪ ನಾಗರಿಕ ಸಂಹಿತೆಯ ಪರಿಕಲ್ಪನೆಯುಜಾಗತಿಕ ಸಂದರ್ಭದಲ್ಲಿಬಹುಸಾಂಸ್ಕøತಿಕ ಸಮಾಜಗಳಲ್ಲಿ ಲಿಂಗ ಸಮಾನತೆಯನ್ನು ಸಾಧಿಸಲು ಸಾಧ್ಯವಿರುವ ಒಂದು ಪ್ರಧಾನ ಸಾಧನವಾಗಿದೆ.ಈ ಬಗೆಗಿನ ಮಹತ್ವದ ವಿಚಾರಧಾರೆಯಲ್ಲಿನ ಪ್ರಧಾನ ಅಂಶಗಳನ್ನುಪ್ರಸ್ತುತ ಲೇಖನವುತಳಸ್ಪರ್ಶಿಯಾಗಿ ಪರಿಶೀಲಿಸುತ್ತದೆ.ಭಾರತದಂತಹ ಬಹುತ್ವದ ರಾಷ್ಟ್ರದಲ್ಲಿ ಈ ಏಕರೂಪ ನಾಗರಿಕ ಸಂಹಿತೆಯನ್ನು ಕಾರ್ಯಗತಗೊಳಿಸುವುದು ಬಹುಹಿಂದಿನಿಂದಲೂ ಸಹ ಒಂದು ಪ್ರಧಾನ ಮತ್ತು ಮಹತ್ವದ ಚರ್ಚಾ ವಿಷಯವಾಗಿದೆ.ಏಕೆಂದರೆ, ವಿಶೇಷವಾಗಿ ವೈಯಕ್ತಿಕ ಮತ್ತು ವಿಭಿನ್ನ ಕಾನೂನುಗಳ ಇತಿಹಾಸ ಹೊಂದಿರುವ ಜಗತ್ತಿನ ಬಹುತೇಕ ರಾಷ್ಟ್ರಗಳಲ್ಲಿ ಮತ್ತು ನಮ್ಮ ಬಹುತ್ವದ ಭಾರತದಲ್ಲಿಯೂ ಮಹಿಳಾ ಸಂಬಂಧಿತವಾದ ಹಕ್ಕುಗಳು, ಸಾಮಾಜಿಕ ನ್ಯಾಯ ಮತ್ತು ಲಿಂಗ ಸಮಾನತೆಯಂತಹ ಪ್ರಧಾನ ವಿಚಾರಧಾರೆಗಳಆಧಾರದ ಮೇಲೆ ಈ ಏಕರೂಪ ನಾಗರಿಕ ಸಂಹಿತೆಯು ಬೀರಿರುವ ಪರಿಣಾಮಗಳನ್ನು ಸ್ಥೂಲವಾಗಿಯೇ ಪ್ರಸ್ತುತ ಲೇಖನದಲ್ಲಿ ದಾಖಲಿಸಲಾಗಿದೆ. ಇದರಲ್ಲಿ ಬಹುಮುಖ್ಯವಾಗಿ ಕಾನೂನಿನ ಚೌಕಟ್ಟುಗಳು, ಸಾಮಾಜಿಕ ದೃಷ್ಟಿಕೋನಗಳು ಮತ್ತು ಅಂತರರಾಷ್ಟ್ರೀಯ ಅಭ್ಯಾಸಗಳನ್ನು ಮೌಲ್ಯೀಕರಿಸುವ ಮೂಲಕ ಲಿಂಗ ನ್ಯಾಯವನ್ನು ಮುನ್ನಡೆಸುವಲ್ಲಿ ಏಕೈಕ ಸಂಹಿತೆಯಾಗಿರುವ ಈ ಏಕರೂಪ ನಾಗರಿಕ ಸಂಹಿತೆಯ ಕಾರ್ಯಚಟುವಟಿಕೆಯ ಬಗೆಗೆ ಸಂಪೂರ್ಣವಾಗಿ ತಿಳುವಳಿಕೆಯನ್ನು ನೀಡಲು ಈ ಲೇಖನವು ರಚಿತಗೊಂಡಿರುತ್ತದೆ.
How this paper connects to the literature. Drag to explore, click any node to open that paper.
